ಮಹಾಭಾರತವು ಒಂದು ಮನರಂಜನೀಯ, ಶೈಕ್ಷಣಿಕ ಹಾಗು ಮನುಷ್ಯ ಕುಲಕ್ಕೆ ಮಹಾಕಾವ್ಯ. ಕಥೆ ಉಪಕಥೆಗಳಿಂದ ಕೂಡಿರುವ ಈ ಮಹಾಕಥನದ ಕಾಲಮಾನ ಕ್ರಿಸ್ತಪೂರ್ವ ೩೦೦೦ ಎಂದು ಅಂದಾಜು ಮಾಡಲಾಗಿದೆ. ಈ ಕಥಾನಕ ಮುಕ್ತಾಯವಾಗುವ ಕಾಲಘಟ್ಟ ನೀತಿ ಮತ್ತು ಮೌಲ್ಯಗಳು ಅವನತಿಯತ್ತ ಸಾಗುವ ಕಲಿಯುಗದ ಆರಂಭವೆಂಬುದು ಗಮನಾರ್ಹ. ಧರ್ಮ, ನೈತಿಕತೆ ಮತ್ತು ಸದ್ಗುಣಗಳು ಮುಗ್ಗುರಿಸಿ ಮರೆಯಾಗುತಿದ್ದ ಕಾಲ. ಆದ್ದರಿಂದ ಈ ಕಥೆ ಧರ್ಮದ ವಿಶ್ವಕೋಶ. ಈ ಕಥೆಯಿಂದ ವಿದ್ಯಾರ್ಥಿಗಳು ಧಾರ್ಮಿಕ ನಡತೆಯನ್ನು ಹಾಗು ಉತ್ಕೃಷ್ಟ ಜೀವನ ಮೌಲ್ಯಗಳನ್ನು ಕಲಿಯಬಹುದು. ಈ ಕಾಲದಲ್ಲಿ ಈ ಮೌಲ್ಯಗಳ ಪ್ರಾಮುಖ್ಯತೆ ಇನ್ನೂ ಹೆಚ್ಚು.
ಮೂಲ ಮಹಾಭಾರತವು ಒಂದು ಬೃಹತ್ ಗ್ರಂಥ. ಇತ್ತೀಚಿನ ದಿನಗಳಲ್ಲಿ ಅರ್ಥೈಸಿಕೊಳ್ಳಬಹುದಾದ ಅನೇಕ ಲಘು ಅನುವಾದ ಲೇಖನಗಳು ಲಭ್ಯವಿದೆ. ಆದರೂ ಜನರು ಇದನ್ನು ಮರೆತ್ತಿದ್ದಾರೆ ಅಥವಾ ಇಂದಿನ ಪೀಳಿಗೆಯವರಿಗೆ ಇದನ್ನು ಓದಲು ಸಮಯವಿಲ್ಲ ಎನ್ನಬಹುದು. ಒಂದು ಮಗುವನ್ನು ಮಹಾಭಾರತದ ಬಗ್ಗೆ ಕೇಳಿದಾಗ ಅದು ಫೇಸ್ಬುಕ್ನಲ್ಲಿದೆಯೇ? ಎಂಬ ಮರುಪ್ರಶ್ನೆ ಮಾಡಿತ್ತು.ಆದ್ದರಿಂದ ಇದನ್ನು ‘ಗುರುಕುಲ ಆಪ್’ನಲ್ಲಿ, ಧ್ವನಿ, ಚಿತ್ರ ಮತ್ತು ದೃಶ್ಯಗಳ ಮೂಲಕ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. ಇದು ಪೋಷಕರಿಗೆ ಮತ್ತು ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಯುವುದರಲ್ಲಿ ಮಾರ್ಗದರ್ಶಕವಾಗುತ್ತದೆ.
ಈ ಮಹಾಕಥನವನ್ನು ಹೇಳಲು ಮೂರನೇಯ ಮುಖ್ಯ ಕಾರಣವೇನೆಂದರೆ - ಈ ಮಹಾಕಥನದುದ್ದಕ್ಕೂ ವಿವರಿಸಿರುವ ಕರ್ಮದ ನಿಯಮಗಳು. ಸರಳವಾಗಿ ಹೇಳುವುದಾದರೆ, ಯಾವುದೇ ಒಂದು ಘಟನೆಯು ಕಾರಣವಿಲ್ಲದೆ ನಡೆಯದು. ನಮಗೆ ಆ ಕಾರಣಗಳ ಅರಿವು ಇರಬಹುದು ಅಥವಾ ಇಲ್ಲದಿರಬಹುದು. ಒಂದು ಪ್ರಸಂಗ ಅಥವಾ ಶತಮಾನಗಳ ಕಾಲ ನಡೆದ ಸರಣಿ ಪ್ರಸಂಗಗಳು ಆ ಘಟನೆಗೆ ಕಾರಣಗಳಿರಬಹುದು. ಇಂತಹ ಘಟನಗಳನ್ನು ಹಾಗು ಅದರ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ನಮಗೆ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಬರುವುದು, ಅದರಿಂದ ನೆಮ್ಮದಿಯೂ ದೊರಕುವುದು. ಇದು ನಮಗೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಧೈರ್ಯದಿಂದ ಇದುರಿಸುವ ಶಕ್ತಿ ಸಾಮರ್ಥ್ಯವನ್ನು ನೀಡುತ್ತದೆ.
ದಕ್ಷಿಣ ಭಾರತದ ಮಹಾನ್ ತತ್ತ್ವಜ್ಞಾನಿಯಾದ ಮಹಾತ್ರೆಯರು ನುಡಿದಂತೆ, ವಾಸ್ತವ ಪರಿಸ್ಥಿತಿಯನ್ನು ಸ್ವೀಕರಿಸದೆ ಪರಿಗಣಿಸಲ್ಪಟ್ಟ ಸಮಸ್ಯೆಯು ನಕಾರಾತ್ಮಕ ಭಾವನೆಯನ್ನು ಸೃಷ್ಟಿಸುತ್ತದೆ. ಸ್ವೀಕಾರದೊಂದಿಗೆ ಪರಿಗಣಿಸಿದ ಸಮಸ್ಯೆಯು ಸಕಾರಾತ್ಮಕ ಭಾವನೆಯನ್ನು ಸೃಷ್ಟಿಸುತ್ತದೆ.
ಇದು ಜೀವನದ ಭಾವನಾತ್ಮಕ ಸಮೀಕರಣ. ಯಾವುದೇ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು ಭಾವನೆಯನ್ನು ನಿಭಾಯಿಸುವ ಕೀಲಿಯಾಗಿದೆ. ಕರ್ಮದ ನಿಯಮವನ್ನು ಅರ್ಥಮಾಡಿಕೊಳ್ಳುವುದು ಸ್ವೀಕಾರದ ಕೀಲಿಯಾಗಿದೆ.
ಮಹಾಭಾರತವು ಒಂದು ವಿಸ್ತಾರವಾದ ಮಹಾಕಾವ್ಯವಾಗಿದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ಈ ಕಥೆಯನ್ನು ಹೇಳಲಾಗಿದೆ. ನಿರೂಪಣೆಯಲ್ಲಿ ಯಾವುದಾದರೂ ನ್ಯೂನತೆಗಳಿದ್ದಲ್ಲಿ, ಓದುಗರು ಅವುಗಳನ್ನು ನನ್ನ ಗಮನಕ್ಕೆ ತರುವಂತೆ ಗೌರವಯುತವಾಗಿ ವಿನಂತಿಸುತ್ತೇನೆ, ನಾನು ಅಗತ್ಯವಾದ ತಿದ್ದುಪಡಿಗಳನ್ನು ಮಾಡಬಹುದು.