ಸರಳಕಥೆಗಳು
Language
gurukula-audio-image
0.001.58
icon-rewindicon-playicon-forward
icon-volume

 

If there are any errors in the script or the narration, please send a note to contact@seva.gurukula.com

 

ಒಂದು ಹಳ್ಳಿ ಇತ್ತು. ಆ ಹಳ್ಳಿಯಲ್ಲಿ ಒಬ್ಬ ಜಿಪುಣನಿದ್ದನು. ಅವನು ಎಂದಿಗೂ ಯಾರಿಗೂ ಏನನ್ನೂ ಕೊಡುತ್ತಿರಲಿಲ್ಲ. ಒಮ್ಮೆ ಆ ಜಿಪುಣನು ಮತ್ತೊಂದು ಹಳ್ಳಿಗೆ ಹೊರಟಿದ್ದನು. ಆ ದಾರಿಯಲ್ಲಿ ಒಂದು ನದಿ ಇತ್ತು. ಅಲ್ಲಿ ಒಂದು ದೋಣಿಯೂ ಇತ್ತು. ಮತ್ತು ಒಬ್ಬ ನಾವಿಕನೂ ಇದ್ದನು.

 

ಜಿಪುಣನು ಆ ದೋಣಿಯಲ್ಲಿ ಕುಳಿತನು. ದೋಣಿಯಲ್ಲಿ ನಾವಿಕನ ಜೊತೆ ಜಿಪುಣನೂ ಹೊರಟನು. ಸ್ವಲ್ಪ ಸಮಯದ ನಂತರ ಭಾರಿ ಮಳೆ ಶುರುವಾಯಿತು. ಗಾಳಿಯು ಬಹಳ ಜೋರಾಗಿ ಬೀಸುತ್ತಿತ್ತು. ದೋಣಿಯು ಅತ್ತಿತ್ತ ತೂಗುತ್ತಿತ್ತು.

 

ಜಿಪುಣನಿಗೆ ಭಯವಾಯಿತು. ಅವನು ನೀರಿನಲ್ಲಿ ಬಿದ್ದನು.  ಅವನಿಗೆ ಈಜಲು ಬರುತ್ತಿರಲಿಲ್ಲ.

 

ಅವನು, "ಸಹಾಯ ಮಾಡಿ, ಸಹಾಯ ಮಾಡಿ" ಎಂದು ಕೂಗಿದನು.

 

ನಾವೀಕನು,"ಬೇಗ! ನಿನ್ನ ಕೈ ಕೊಡು", ಎಂದು ಹೇಳಿದನು. ಆದರೆ ಜಿಪುಣನು ಯಾರಿಗೂ ಎಂದಿಗೂ ಏನೂ ಕೊಡುತ್ತಿರಲಿಲ್ಲ. ತನ್ನ ಕೈಯನ್ನೂ ಕೊಡಲು ಇಷ್ಟವಿರಲಿಲ್ಲ.

 

ಆಗ ನಾವಿಕನು, "ಇವನೊಬ್ಬ ಮೂರ್ಖ", ಅಂದುಕೊಂಡನು.

 

ಒಂದು ಉಪಾಯವನ್ನು ಹೂಡಿದನು. ಅವನು, "ನನ್ನ ಕೈಯನ್ನು ಹಿಡಿ", ಎಂದು ಹೇಳಿದನು.

 

ತಕ್ಷಣ, ಜಿಪುಣನು ನಾವಿಕನ ಕೈಯನ್ನು ಹಿಡಿದನು. ನಂತರ ದೋಣಿಯಲ್ಲಿ ಕುಳಿತನು.